ನವೆಂಬರ್ 13ರಂದು ನಡೆಯಲಿರುವ ಉಪಚುನಾವಣೆಯ ಹಿನ್ನೆಲೆಯಲ್ಲಿ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಿರುಸಿನ ಪ್ರಚಾರ ನಡೆಸಿದರು.
ಮೂರು ದಿನಗಳ ಕಾಲ ನಿರಂತರ ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡ ಮುಖ್ಯಮಂತ್ರಿಗಳು 18 ಬಹಿರಂಗ ಸಭೆಗಳಲ್ಲಿ ಭಾಗಿಯಾಗುವ ಮೂಲಕ ರಾಜಕೀಯ ನಾಯಕರಲ್ಲಿ ಬೆರಗು ಮೂಡಿಸಿದ್ದಾರೆ.
- ಬಹಿರಂಗ ಸಭೆಗಳಲ್ಲಿ ನೇರವಾಗಿ ಭಾಗವಹಿಸಿ ಮುಖ್ಯಮಂತ್ರಿಗಳ ಭಾಷಣ ಕೇಳಿದ ಮತದಾರರ ಸಂಖ್ಯೆ 1.10 ರಿಂದ 1.23 ಲಕ್ಷ.
- (ಪ್ರತೀ ಸಭೆಯಲ್ಲಿ ಕನಿಷ್ಠ 3000 ದಿಂದ ಗರಿಷ್ಠ 15000 ವರೆಗೂ ಜನ ಸೇರಿದ್ದರು)
- 28 ಗ್ರಾಮ ಪಂಚಾಯ್ತಿ, 3 ಪುರಸಭೆ, 1 ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಸಂಪೂರ್ಣವಾಗಿ ಮುಖ್ಯಮಂತ್ರಿಗಳು ಮತಯಾಚನೆ ಮಾಡಿ ಮತದಾರರನ್ನು ನೇರವಾಗಿ ತಲುಪಿದ್ದಾರೆ.
- ಸಂಡೂರು ವಿಧಾನಸಭಾ ಕ್ಷೇತ್ರದ ಶೇ70 ರಷ್ಟು ಭೂ ಭಾಗದಲ್ಲಿ ಪ್ರಚಾರ
- ಒಟ್ಟು 3 ದಿನಗಳಲ್ಲಿ ಪ್ರಯಾಣಿಸಿದ್ದು ಅಂದಾಜು 320 ಕಿಲೋ ಮೀಟರ್.
- ರೈತರು ಮತ್ತು ಭೂ ಹೀನರು ಕಳೆದ 652 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೇ ಹೋಗಿ ಅವರ ಅಹವಾಲು ಕೇಳಿ, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
- ನಾನಾ ಕಾರಣಗಳಿಂದ ಮುನಿಸಿಕೊಂಡಿದ್ದ ನಾಲ್ಕು ಮಂದಿ ಸ್ಥಳೀಯ ನಾಯಕರ ಮನೆಗಳಿಗೇ ಭೇಟಿ ನೀಡಿ ಅವರ ಮನವೊಲಿಸಿ ತಮ್ಮ ಜೊತೆ ಸಕ್ರಿಯವಾಗಿ ಪ್ರಚಾರದಲ್ಲಿ ತೊಡಗಿಸಿಕೊಳ್ಳುವಲ್ಲಿ ಯಶಸ್ವಿ ಆಗಿದ್ದು.
- ಸಂಡೂರು ಕ್ಷೇತ್ರದಲ್ಲಿ ಬಿಜೆಪಿ ಪರಿವಾರ ಹರಡಿದ್ದ ಪ್ರತಿಯೊಂದು ಸುಳ್ಳುಗಳನ್ನೂ ಉಲ್ಲೇಖಿಸಿ ಅಧಿಕೃತ ಅಂಕಿ-ಅಂಶಗಳ ಸಮೇತ ಸ್ಪಷ್ಟನೆ ನೀಡಿ ಸತ್ಯ ಸಂಗತಿಗಳ ಮನವರಿಕೆ ಮಾಡಿಸಲಾಯ್ತು.
- ಜನಾರ್ಧನರೆಡ್ಡಿಯವರು ಮತ್ತೆ ಬಳ್ಳಾರಿಗೆ ಬಂದಿದ್ದರಿಂದ ಆಗುತ್ತಿರುವ ಬೆಳವಣಿಗೆಗಳಿಂದ ಮತ್ತೆ ಭಯದ ವಾತಾವರಣ ಸೃಷ್ಟಿಯಾಗಬಹುದು ಎಂದು ಹೆದರಿದ್ದ ಉದ್ಯಮಪತಿಗಳು ಹಾಗೂ ಜನತೆಗೆ ಆತ್ಮಸ್ಥೈರ್ಯ ನೀಡಿದ್ದು.

