ಕರಗದ ಬೆಳಕಿನಲ್ಲಿ, ಕನ್ನಡ ಸಂಸ್ಕೃತಿಯ ಬೆಳಕು!

ಹಲವು ‘ಭಾಗ್ಯ’ಗಳ ಸರದಾರ ಸಿದ್ದರಾಮಯ್ಯ! ಮಾಸ್ ಲೀಡರ್ ಆಗಿದ್ದು ಹೇಗೆ?

ಸಿದ್ದರಾಮಯ್ಯ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ. ಕರ್ನಾಟಕ ರಾಜ್ಯ ಕಂಡ ಅತ್ಯಂತ ಜನಪ್ರಿಯ ರಾಜಕಾರಣಿಗಳಲ್ಲಿ ಸಿದ್ದರಾಮಯ್ಯರದ್ದು ಮುಂಚೂಣಿಯ ಹೆಸರು. ಅತ್ಯಂತ ಜನಪ್ರಿಯ ಮಾಜಿ ಸಿಎಂಗಳಲ್ಲಿ ಸಿದ್ದರಾಮಯ್ಯ ಕೂಡ ಒಬ್ಬರು. ಹಲವು ಉಚಿತ ‘ಭಾಗ್ಯ’ಗಳ ಸರದಾರ ಅಂತ ಕರೆಯಲ್ಪಡುವ ಸಿದ್ದರಾಮಯ್ಯ, ಮಾಜಿ ಸಿಎಂ ದೇವರಾಜ ಅರಸ್  ಅವರನ್ನು ಬಿಟ್ಟರೆ 5 ವರ್ಷ ಆಡಳಿತ ಅವಧಿ ಪೂರೈಸಿದ್ದ ಸಿಎಂ ಅಂದರೆ ಸಿದ್ದರಾಮಯ್ಯ ಒಬ್ಬರೇ. ಸದ್ಯ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಿ, ಮುಖ್ಯಮಂತ್ರಿ ಆಗಬೇಕೆಂಬ ಕನಸು ಕಾಣುತ್ತಿರುವ ಸಿದ್ದರಾಮಯ್ಯ ಅವರ ಜೀವನ ಹೇಗಿತ್ತು? ಅವರ ರಾಜಕೀಯ ಜೀವನದ ಹೆಜ್ಜೆ ಗುರುತುಗಳೇನು? ಇಲ್ಲಿವೆ ಓದಿ ಕುತೂಹಲಕಾರಿ ಮಾಹಿತಿ…

ಸಿದ್ದರಾಮಯ್ಯ 1948ರಲ್ಲಿ ಮೈಸೂರಿನ ವರುಣಾ ಹೋಬಳಿ ಬಳಿಯ ಸಿದ್ದರಾಮನ ಹುಂಡಿ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ಸಿದ್ಧರಾಮೇಗೌಡ ಹಾಗೂ ತಾಯಿ ಬೋರಮ್ಮ. ಅಣ್ಣ-ತಮ್ಮ, ಅಕ್ಕ-ತಂಗಿಯರಿರುವ ದೊಡ್ಡ ಕುಟುಂಬದಲ್ಲಿ ಜನಿಸಿದ ಸಿದ್ದರಾಮಯ್ಯ ಬಾಲ್ಯದಿಂದಲೂ ಚೂಟಿ ಹುಡುಗನಾಗಿದ್ದರು.

5ನೇ ಕ್ಲಾಸ್‌ಗೆ ಡೈರೆಕ್ಟ್ ಎಂಟ್ರಿ!

ಮೊದಲೆಲ್ಲ ಶಾಲೆಗೆ ಹೋಗುವುದೇ ದೊಡ್ಡ ವಿಚಾರ. ಹೀಗಾಗಿ ಆ ಕ್ಲಾಸ್, ಈ ಕ್ಲಾಸ್, ಪಾಸ್, ಫೇಲ್ ಎಂಬ ವಿಚಾರವೇ ಬರುತ್ತಿರಲಿಲ್ಲ. ಹೀಗಾಗಿ ಬಾಲ್ಯದಲ್ಲಿ ಆಟ ಆಡಿಕೊಂಡು, ಎಮ್ಮೆ ಮೇಯಿಸಿಕೊಂಡು ತುಂಟಾಟವಾಡಿಕೊಂಡಿದ್ದ ಸಿದ್ದರಾಮಯ್ಯ, ಡೈರೆಕ್ಟ್ ಆಗಿ 5ನೇ ಕ್ಲಾಸ್‌ಗೆ ಎಂಟ್ರಿಕೊಟ್ಟರಂತೆ!

ಆರ್ಥಿಕ ಸಂಕಷ್ಟದ ನಡುವೆಯೇ ಲಾಯರ್ ಆದ ಸಿದ್ದರಾಮಯ್ಯ

ಸಿದ್ದರಾಮಯ್ಯರದ್ದು ಆರ್ಥಿಕವಾಗಿ ಅಂತ ಶ್ರೀಮಂತ ಕುಟುಂಬವೇನೂ ಆಗಿರಲಿಲ್ಲ. ಹೀಗಾಗಿ ಆಗಿನ ಕಾಲಕ್ಕೆ ಶಾಲೆಗೆ ಹೋಗುವುದು ಸುಲಭವಾಗಿರಲಿಲ್ಲ. ಆದರೂ ಓದಿನಲ್ಲಿ ಚುರುಕಾಗಿದ್ದ ಸಿದ್ದರಾಮಯ್ಯ ಕಷ್ಟದಲ್ಲಿಯೇ ಓದಿ ಮುಂದಿನ ತರಗತಿಗೆ ಹೋಗುತ್ತಿದ್ದರು. ಮೈಸೂರು ವಿವಿಯಿಂದ ಕಾನೂನು ಪದವಿ ಪಡೆದು, ಚಿಕ್ಕಬೋರಯ್ಯ ಎಂಬ ವಕೀಲರ ಬಳಿ ಜೂನಿ ಯರ್ ಆಗಿ ನಂತರ 1978ರವರೆಗೆ ಸ್ವಂತ-ವಕೀಲಿ ವೃತ್ತಿ ನಡೆಸಿದರು.

ಭಾರತೀಯ ಲೋಕದಳದಿಂದ ರಾಜಕೀಯ ಪ್ರವೇಶ

ಸಿದ್ದರಾಮಯ್ಯ ಅವರು ಜೆಡಿಎಸ್‌ನಿಂದ ಬಂದು, ಕಾಂಗ್ರೆಸ್ ಸೇರಿ ಮುಖ್ಯಮಂತ್ರಿ ಆಗಿರೋದು ನಿಮಗೆ ಗೊತ್ತು. ಆದರೆ ಅವರು ರಾಜ್ಯ ರಾಜಕೀಯಕ್ಕೆ ಪದಾರ್ಪಣೆ ಮಾಡಿದ್ದು ಭಾರತೀಯ ಲೋಕದಳ ಎಂಬ ಅಂದಿನ ರಾಜಕೀಯ ಪಕ್ಷದಿಂದ. 1983ರ ರಾಜ್ಯ ಚುನಾವಣೆಯಲ್ಲಿ ಭಾರತೀಯ ಲೋಕದಳದಿಂದ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಗೆದ್ದರು.

ಕನ್ನಡ ಕಾವಲು ಸಮಿತಿಯ ಮೊದಲ ಅಧ್ಯಕ್ಷ

ಭಾರತೀಯ ಲೋಕದಳದಿಂದ ಜನತಾ ಪಕ್ಷಕ್ಕೆ ಸೇರಿದಾಗ, ಇವರನ್ನು ಹೊಸದಾಗಿ ರಚಿಸಿದ ಕನ್ನಡ ಕಾವಲು ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಗಡಿಭಾಗಗಳಾದ ಕಾಸರಗೋಡು, ಬೆಳಗಾವಿ, ಕೋಲಾರ ಮುಂತಾದೆಡೆ ಪ್ರವಾಸ ಕೈಗೊಂಡು ವರದಿ ಸಲ್ಲಿಸಿದರು.

ಸಿದ್ದರಾಮಯ್ಯ ರಾಜಕೀಯ ಹೆಜ್ಜೆ ಗುರುತು

1985ರಲ್ಲಿ ಚಾಮುಂಡೇಶ್ವರಿಯಿಂದ ಗೆಲುವು

ಪಶುಸಂಗೋಪನೆ ಸಚಿವರಾಗಿ ಅಧಿಕಾರ

ಬಳಿಕ ರೇಷ್ಮೆ ಸಚಿವ, ಸಾರಿಗೆ ಸಚಿವರಾಗಿ ಕಾರ್ಯ

1989ರ ಚುನಾವಣೆಯಲ್ಲಿ ಸೋಲು

ಜನತಾ ಪಕ್ಷ ಇಬ್ಭಾಗದ ಬಳಿಕ ಜನತಾದಳ ಸೇರ್ಪಡೆ

1994ರಲ್ಲಿ ಚುನಾವಣೆ ಗೆಲುವು, ಹಣಕಾಸು ಖಾತೆ ನಿರ್ವಹಣೆ

1999ರಲ್ಲಿ ಜೆಡಿಎಸ್‌ ರಚನೆಯಾದಾಗ ದೇವೇಗೌಡರೊಂದಿಗೆ ಪಕ್ಷ ಸೇರ್ಪಡೆ

1999ರಲ್ಲಿ ಜೆಡಿಎಸ್‌ ಅಧ್ಯಕ್ಷರಾಗಿ ಆಯ್ಕೆ, ಅದೇ ವರ್ಷ ಚುನಾವಣೆಯಲ್ಲಿ ಸೋಲು

2004ರಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ 2 ಬಾರಿ ಉಪಮುಖ್ಯಮಂತ್ರಿ ಸ್ಥಾನ

ಮತ್ತೊಮ್ಮೆ ಹಣಕಾಸು ಸಚಿವರಾಗಿ ಕಾರ್ಯ

2006ರಲ್ಲಿ ಜೆಡಿಎಸ್‌ನಿಂದ ಉಚ್ಛಾಟನೆ

2004ರ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಬರದ ಕಾರಣ ಜೆಡಿಎಸ್​ ಹಾಗೂ ಕಾಂಗ್ರೆಸ್ ಸೇರಿ​ ಸಮ್ಮಿಶ್ರ ಸರ್ಕಾರ ರಚಿಸಿತ್ತು. ಧರಂಸಿಂಗ್ ಮುಖ್ಯಮಂತ್ರಿಯಾದರೆ, ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾಗಿದ್ದರು. ಈ ವೇಳೆ ಜೆಡಿಎಸ್​ನಲ್ಲಿ ದೇವೇಗೌಡರನ್ನು ಹೊರತುಪಡಿಸಿದರೆ ಸಿದ್ದರಾಮಯ್ಯ ಪ್ರಬಲನಾಯಕನಾಗಿದ್ದರು. ಆದರೆ 2006ರಲ್ಲಿ ದೇವೇಗೌಡರು ಸಿದ್ದರಾಮಯ್ಯರನ್ನು ಪಕ್ಷದಿಂದಲೇ ಉಚ್ಛಾಟಿಸಿದರು.

ಅಂಹಿದ ಸಮಾವೇಶ ಮಾಡಿದ್ದಕ್ಕೆ ಶಿಕ್ಷೆ!

ಸಿದ್ದರಾಮಯ್ಯ ಅವರು ದೇವೇಗೌಡರ ವಿರೋಧದ ನಡುವೆಯೂ ಅಹಿಂದ ಸಮಾವೇಶ ನಡೆಸಿದರು. ಅಲ್ಪಸಂಖ್ಯಾತ, ಹಿಂದುವಳಿದ ವರ್ಗ ಮತ್ತು ದಲಿತ ವರ್ಗದವರನ್ನು ಸೆಳೆಯುವ ಉದ್ಧೇಶ ಇದರ ಹಿಂದಿತ್ತು. ಆದರೆ ಅಹಿಂದ ಸಮಾವೇಶ ಮಾಡಿದ್ದಾರೆ ಎಂಬ ಕಾರಣಕ್ಕೆ ದೇವೇಗೌಡರು ಸಿದ್ದರಾಮಯ್ಯರನ್ನು ಜೆಡಿಎಸ್‌ ಪಕ್ಷದಿಂದ ಉಚ್ಛಾಟನೆ ಮಾಡಿದರು. ಅಷ್ಟೇ ಅಲ್ಲದೇ ಸಿಎಂ ಆಗಿದ್ದ ಧರ್ಮಸಿಂಗ್​ಗೆ ಹೇಳಿ ಉಪ ಮುಖ್ಯಮಂತ್ರಿಸ್ಥಾನದಿಂದಲೂ ಕೆಳಗೆ ಇಳಿಸಿದರು.

2014ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ

ಬಳಿಕ ಕಾಂಗ್ರೆಸ್ ಸೇರಿದ ಸಿದ್ದರಾಮಯ್ಯ ಬಹುಮತದೊಂದಿದೆ 2014ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. 2014ರಿಂದ 2018ರವರೆಗೆ ಪೂರ್ಣಾವಧಿ ಸಿಎಂ ಆಗಿ ಕಾರ್ಯ ನಿರ್ವಹಿಸಿದರು.

ರಾಜಕೀಯದಲ್ಲಿ ಹಲವು ಸಾಧನೆ

ಶಾಸಕರಾಗಿ, ವಿವಿಧ ಖಾತೆಯ ಸಚಿವರಾಗಿ, ಹಣಕಾಸು ಸಚಿವರಾಗಿ, ಡಿಸಿಎಂ ಆಗಿ, ಮುಖಮಂತ್ರಿಯಾಗಿ, ವಿಧಾನಸಭೆ ವಿಪಕ್ಷ ನಾಯಕನಾಗಿ, ವಿವಿಧ ಸಮಿತಿ ಮುಖ್ಯಸ್ಥನಾಗಿ ಸಿದ್ದರಾಮಯ್ಯ ಅವರು ರಾಜಕೀಯದಲ್ಲಿ ಅಪಾರ ಅನುಭವ ಪಡೆದಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ 5 ಬಾರಿ ಶಾಸಕರಾಗಿ ಗೆಲುವು ಕಂಡಿದ್ದ ಸಿದ್ದರಾಮಯ್ಯ, 3 ಬಾರಿ ಸೋಲು ಕಂಡಿದ್ದಾರೆ. ಇದುವರೆಗೆ ಒಟ್ಟು ರಾಜಕೀಯದಲ್ಲಿ 8 ಬಾರಿ ಗೆಲುವು ಸಾಧಿಸಿದ್ದಾರೆ.

ಹಲವು ‘ಉಚಿತ ಭಾಗ್ಯ’ಗಳ ಸರದಾರ 

ಮುಖ್ಯಮಂತ್ರಿಯಾಗಿ ಅನ್ನಭಾಗ್ಯ, ಶಾದಿಭಾಗ್ಯ, ಕ್ಷೀರಭಾಗ್ಯಗಳಂತಹ ಯೋಜನೆಗಳನ್ನು ಮಾಡಿದರು ಮತ್ತು ದಲಿತವರ್ಗಗಳಿನ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸನ್ನು ನೀಡಿದ್ದರು. ಇದರಲ ಜೊತೆಗೆ ಇಂದಿರಾ ಕ್ಯಾಂಟೀನ್ ಆರಂಭಿಸಿ ಕಡಿಮೆ ಬೆಲೆಗೆ ಊಟ ಒದಗಿಸಿದರು.

Share the Post:

Related Posts

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಕಂಪನಿಯಿಂದ ಬಿಝ್ಇಂಟೆಲ್ ಹಬ್ ಸ್ಥಾಪನೆ

ಬೆಂಗಳೂರು: ಡಾಬಸ್‌ಪೇಟೆ – ದೊಡ್ಡಬಳ್ಳಾಪುರ ನಡುವೆ ರಾಜ್ಯ ಸರ್ಕಾರವು ಅಭಿವೃದ್ಧಿಪಡಿಸುತ್ತಿರುವ ಮಹತ್ವಾಕಾಂಕ್ಷಿ ಕ್ವಿನ್ ಸಿಟಿಯಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಕಂಪನಿಯು 1,200 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಜಾಗತಿಕ

Read More

ಇಂದಿನಿಂದ ರಾಜ್ಯದಾದ್ಯಂತ ಅತ್ಯಾಧುನಿಕ ಆ್ಯಂಬುಲೆನ್ಸ್ ಸೇವೆ ಲಭ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಇಂದಿನಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಆ್ಯಂಬುಲೆನ್ಸ್ ಸೇವೆ ಲಭ್ಯವಾಗಲಿದ್ದು, ಈ ಸೇವೆ ಪರಿಣಾಮಕಾರಿಯಾಗಿ ಜನರಿಗೆ ತಲುಪಬೇಕು ಎನ್ನುವುದು ನನ್ನ ಆಶಯ ಎಂದು ಮುಖ್ಯಮಂತ್ರಿ

Read More

ನಿಮ್ಮ ಅಹವಾಲು

ಮುಖ್ಯಮಂತ್ರಿಗಳಿಗೆ ನಿಮ್ಮ ದೂರನ್ನು ತಲುಪಿಸಲು ಈ ಕೆಳಗಿನ ಅರ್ಜಿಯನ್ನು ತುಂಬಿ