ಕರಗದ ಬೆಳಕಿನಲ್ಲಿ, ಕನ್ನಡ ಸಂಸ್ಕೃತಿಯ ಬೆಳಕು!

ಸಾಮಾಜಿಕ ನ್ಯಾಯದ ಬಗ್ಗೆ ಬದ್ಧತೆ ಇರಬೇಕೇ ಹೊರತು, ತೋರಿಕೆಯಲ್ಲ

ಬಾಯಲ್ಲಿ ಸಾಮಾಜಿಕ ನ್ಯಾಯ ಹೇಳೋದು, ಸಾಮಾಜಿಕ ನ್ಯಾಯದ ವಿರೋಧಿಗಳ ಜೊತೆ ಹೋಗಿ ಸೇರೋದು ಸರಿಯಲ್ಲ : ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು : ಬಾಯಲ್ಲಿ ಸಾಮಾಜಿಕ ನ್ಯಾಯ ಹೇಳೋದು, ಸಾಮಾಜಿಕ ನ್ಯಾಯದ ವಿರೋಧಿಗಳ ಜೊತೆ ಹೋಗಿ ಸೇರೋದು ಸರಿಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು.‌

ಕಾವೇರಿ ನಿವಾಸದಲ್ಲಿ ಹಿರಿಯ ಪತ್ರಕರ್ತ ಡಾ.ಎಂ.ಎಸ್.ಮಣಿ ಅವರ “ಒಳಕೋವೆ” ಕೃತಿ ಬಿಡುಗಡೆಗೊಳಿಸಿ, ಐದು ಮಂದಿ ಸಾಧಕರಿಗೆ ವಿ.ಪಿ.ಸಿಂಗ್ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದರು.

ಸಾಮಾಜಿಕ ನ್ಯಾಯದ ಬಗ್ಗೆ ಬದ್ಧತೆ ಇರಬೇಕು. ತೋರಿಕೆ ಇರಬಾರದು. ಇವತ್ತಿನ‌ ಸಂದರ್ಭದಲ್ಲಿ ಸಾಮಾಜಿಕ ನ್ಯಾಯದ ಬಗ್ಗೆ ಭಾಷಣ ಮಾಡುವವರು, ಮಾತಾಡುವವರು ಬಹಳ ಮಂದಿ ಸಿಗ್ತಾರೆ. ಆದರೆ ಬದ್ಧತೆ ಇರುವವರು ಕಡಿಮೆ. ಇವತ್ತಿನ‌ ವ್ಯವಸ್ಥೆ ಸುಧಾರಣೆಗೆ ವಿರುದ್ಧವಾದದ್ದು. ವ್ಯವಸ್ಥೆ ಜೊತೆ ರಾಜಿ ಮಾಡಿಕೊಂಡರೆ ಏನಾಗತ್ತೆ? ರಾಜಿ ಮಾಡಿಕೊಳ್ಳದಿದ್ದರೆ ಏನಾಗುತ್ತದೆ ಎನ್ನುವ ಅರಿವು ನನಗೆ ಇದೆ ಎಂದರು. ಈ ಅರಿವು ಎಲ್ಲರಿಗೂ ಇರಬೇಕು. ಜಾತಿ ವ್ಯವಸ್ಥೆಗೆ ಚಲನೆ ಇಲ್ಲ, ವರ್ಗ ವ್ಯವಸ್ಥೆಗೆ ಚಲನೆ ಇದೆ. ಅದಕ್ಕೇ ಬುದ್ದ, ಬಸವ ಅಂಬೇಡ್ಕರ್ ಎಷ್ಟು ಹೋರಾಡಿದರೂ ಜಾತಿ ಹೋಗಿಲ್ಲ. ಜಾತಿ ಎನ್ನುವುದು ಸಾಮಾಜಿಕ‌ ವಾಸ್ತವ. ಸಾಮಾಜಿಕ‌ ನ್ಯಾಯದ ಪರವಾದ ನಿಜವಾದ ಬದ್ಧತೆ ಇಟ್ಟುಕೊಂಡು ಕೆಲಸ ಮಾಡುವವರು ಹೆಚ್ಚೆಚ್ಚು ಬರಬೇಕು ಎಂದರು.

ಡಾ.ಎಂ.ಎಸ್.ಮಣಿ ಸಾಮಾಜಿಕ ನ್ಯಾಯದ ಪರವಾಗಿ ಬದ್ಧತೆ ಉಳ್ಳವರು. ಇವರು ಇನ್ನೂ ಹೆಚ್ಚಿನ ಸಾಧನೆ ಮಾಡಲಿ ಎಂದು ಹಾರೈಸಿದರು. ಇದೇ ಸಂದರ್ಭದಲ್ಲಿ ನಾನಾ ಕ್ಷೇತ್ರಗಳ ಐದು ಮಂದಿ ಸಾಧಕರಿಗೆ ಮಾಜಿ ಪ್ರಧಾನಿ ವಿ.ಪಿ.ಸಿಂಗ್ ಹೆಸರಿನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಐವತ್ತು ವರ್ಷಗಳ‌ ಕಾಲ ಪತ್ರಿಕಾ ವೃತ್ತಿಯ ಕುರಿತಾದ ನಾನಾ ಕ್ಷೇತ್ರಗಳಲ್ಲಿ ಶ್ರಮಿಸಿದ ಕೊಪ್ಪಳ ವಿಶ್ವವಿದ್ಯಾಲಯ ಕುಲಪತಿ ಪ್ರೊ ಬಿ.ಕೆ.ರವಿ ಅವರ ಪತ್ರಿಕಾ ವೃತ್ತಿಯ 50 ಸಂಭ್ರಮದ ಹಿನ್ನಲೆ ಜೀವಮಾನದ ಸಾಧನೆಗಾಗಿ ಮುಖ್ಯಮಂತ್ರಿಗಳು ಸನ್ಮಾನಿಸಿದರು.

ಲೇಖಕಿಯರಾದ ಡಾ. ಷರೀಫಾ, ಸಮಾಜ ಸೇವಕರು, ಲೇಖಕರಾದ ಡಾ. ನಳಿನಾಕ್ಷಿ ಸಣ್ಣಪ್ಪ, ರಾಷ್ಟ್ರೀಯ ಯುವ ಪ್ರಶಸ್ತಿ ವಿಜೇತರಾದ ನಾಗವೇಣಿ, ಹಿರಿಯ ಪತ್ರಕರ್ತರಾದ ಸಂಗಮ್ ದೇವ್, ಕರ್ನಾಟಕ ಸಂದ್ಯಾಕಾಲ ಪತ್ರಿಕೆಯ ಸಂಪಾದಕರಾದ ಶಿವಲಿಂಗಪ್ಪ ಇವರಿಗೆ ವಿ.ಪಿ.ಸಿಂಗ್ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು.

Share the Post:

Related Posts

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಕಂಪನಿಯಿಂದ ಬಿಝ್ಇಂಟೆಲ್ ಹಬ್ ಸ್ಥಾಪನೆ

ಬೆಂಗಳೂರು: ಡಾಬಸ್‌ಪೇಟೆ – ದೊಡ್ಡಬಳ್ಳಾಪುರ ನಡುವೆ ರಾಜ್ಯ ಸರ್ಕಾರವು ಅಭಿವೃದ್ಧಿಪಡಿಸುತ್ತಿರುವ ಮಹತ್ವಾಕಾಂಕ್ಷಿ ಕ್ವಿನ್ ಸಿಟಿಯಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಕಂಪನಿಯು 1,200 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಜಾಗತಿಕ

Read More

ಇಂದಿನಿಂದ ರಾಜ್ಯದಾದ್ಯಂತ ಅತ್ಯಾಧುನಿಕ ಆ್ಯಂಬುಲೆನ್ಸ್ ಸೇವೆ ಲಭ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಇಂದಿನಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಆ್ಯಂಬುಲೆನ್ಸ್ ಸೇವೆ ಲಭ್ಯವಾಗಲಿದ್ದು, ಈ ಸೇವೆ ಪರಿಣಾಮಕಾರಿಯಾಗಿ ಜನರಿಗೆ ತಲುಪಬೇಕು ಎನ್ನುವುದು ನನ್ನ ಆಶಯ ಎಂದು ಮುಖ್ಯಮಂತ್ರಿ

Read More

ನಿಮ್ಮ ಅಹವಾಲು

ಮುಖ್ಯಮಂತ್ರಿಗಳಿಗೆ ನಿಮ್ಮ ದೂರನ್ನು ತಲುಪಿಸಲು ಈ ಕೆಳಗಿನ ಅರ್ಜಿಯನ್ನು ತುಂಬಿ