ಕರಗದ ಬೆಳಕಿನಲ್ಲಿ, ಕನ್ನಡ ಸಂಸ್ಕೃತಿಯ ಬೆಳಕು!

ಪೋಡಿ ಮುಕ್ತ  ಗ್ರಾಮಗಳಾಗಬೇಕು, ಸರ್ವೇ ಕಾರ್ಯ ಪೂರ್ಣಗೊಳ್ಳಬೇಕು: ಸಿ.ಎಂ ಸಿದ್ದರಾಮಯ್ಯ ಕರೆ

ಬೆಂಗಳೂರು,ಏಪ್ರಿಲ್ 10 : ನಮ್ಮದು ಹಳ್ಳಿಗಳ ಮತ್ತು ರೈತರ ದೇಶ. ಗ್ರಾಮಗಳು ಮತ್ತು ರೈತರು ನೆಮ್ಮದಿಯಾಗಿ ಉತ್ಪಾದನೆಯಲ್ಲಿ ತೊಡಗಬೇಕಾದರೆ ಸರ್ವೇ ಕಾರ್ಯ ಸರಿಯಾಗಿ ಪೂರ್ಣಗೊಳ್ಳಬೇಕು. ಕೆರೆ ಕಟ್ಟೆಗಳ ಒತ್ತುವರಿ ತೆರವುಗೊಳಿಸಬೇಕು, ಪೋಡಿ ಮುಕ್ತ ಗ್ರಾಮಗಳಾಗಬೇಕು. ಇದಕ್ಕಾಗಿ ಇಲಾಖೆಯ ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ಶ್ರಮಿಸಿ, ಧ್ವನಿ ಇಲ್ಲದವರ ಪರವಾಗಿ ಕೆಲಸ ಮಾಡುವುದೇ ನಿಜವಾದ ಪುಣ್ಯದ ಕಾರ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.

ಪರವಾನಗಿ ಭೂಮಾಪಕರ ಕಾಯಂ

ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಹಾಗೂ ಇಲಾಖೆಯ ನೌಕರರ ಸಂಘಗಳ ಪದಾಧಿಕಾರಿಗಳು  ಹಾಗೂ ಪರವಾನಗಿ ಭೂಮಾಪಕರ ಸಂಘದ ಪದಾಧಿಕಾರಿಗಳು ಮುಖ್ಯಮಂತ್ರಿಗಳಿಗೆ ಭಿನ್ನವತ್ತಳೆಯನ್ನು ಸಲ್ಲಿಸಿದ್ದಾರೆ. ಪರಿಶೀಲಿಸಿ ಅಗತ್ಯ ಕ್ರಮ ವಹಿಸಲಾಗುವುದು ಎಂದರು. ಇನ್ನು ಮುಂದೆ ಪ್ರತೀ ವರ್ಷ ರಾಷ್ಟ್ರೀಯ ಭೂಮಾಪನ ದಿನಾಚರಣೆಯನ್ನು ಪ್ರತೀ ವರ್ಷ ಆಚರಿಸಬೇಕು ಎಂದು ಸೂಚಿಸಿದರು.  ಇದೇ ಸಂದರ್ಭದಲ್ಲಿ ಭೂಮಾಪಕರಿಗೆ 465 ಆಧುನಿಕ ತಂತ್ರಜ್ಞಾನ ಆಧಾರಿತ ರೋವರ್ ಉಪಕರಣಗಳನ್ನು ವಿತರಣೆ ಮಾಡಿ ಇಲಾಖೆಯ ಸ್ಮರಣಸಂಚಿಕೆಯನ್ನು ಬಿಡುಗಡೆ ಮಾಡಿದರು.  

ವೈಜ್ಞಾನಿಕವಾಗಿ ಸರ್ವೆ ಕೆಲಸ ಆಗಬೇಕು ಆರಂಭದಿಂದ ಅಂತ್ಯದವರೆಗೆ ಎಲ್ಲಾ ಕಂಪ್ಯೂಟರೀಕರಣ ಮಾಡಲಾಗುವುದು : ಕಂದಾಯ ಸಚಿವ ಕೃಷ್ಣಬೈರೇಗೌಡ

ಕಾಲ ಬದಲಾದಂತೆ ಕಾಲಕ್ಕೆ ತಕ್ಕ ಹಾಗೆ ಆಧುನೀಕತೆಯನ್ನು ಅಳವಡಿಸಿಕೊಂಡು ಸರ್ವೆ ಕೆಲಸವನ್ನು ಮಾಡಲಾಗುತ್ತಿದೆ  ಕರ್ನಾಟಕ ಸರ್ಕಾರದ ಪ್ರಮುಖ ಇಲಾಖೆಯಾದ ಕಂದಾಯ ಇಲಾಖೆಯ ಅಧೀನ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯು ಭೂಮಿಯ ಅಳತೆ ಮತ್ತು ಭೂದಾಖಲೆಗಳನ್ನು ಸಿದ್ಧಪಡಿಸುವ ಮಹತ್ತರ ಜವಾಬ್ದಾರಿ ಹೊಂದಿದ ಸರ್ಕಾರದ ಪ್ರಮುಖ ಜನಸ್ನೇಹಿ ಇಲಾಖೆಯಾಗಿದೆ. ಜಲಾಶಯ, ನೀರಾವರಿ, ರಸ್ತೆ, ಇಂಡಸ್ಟ್ರಿಯಲ್ , ಬಡಾವಣೆ ನಿರ್ಮಾಣಕ್ಕೆ ಸರ್ವೆ ಇಲಾಖೆ ನಕ್ಷೆ ಸಿದ್ದಪಡಿಸಿದರೇ ಮಾತ್ರ ಇದೆಲ್ಲಾ ಸಾಧ್ಯ . ಆಧುನಿಕ ತಂತ್ರಜ್ಞಾನ ಆಧಾರಿತ ಸರ್ವೆ ನಡೆಸಲು ಇಲಾಖೆ ಕ್ರಮ ವಹಿಸುತ್ತಿದೆ ಎಂದರು. ಆರಂಭದಿಂದ ಅಂತ್ಯದವರೆಗೆ ಎಲ್ಲಾ ಕಂಪ್ಯೂಟರೀಕರಣ ಮಾಡಲಾಗುವುದು ಎಂದರು.

ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಹಾಗೂ ಇಲಾಖೆಯ ನೌಕರರ ಸಂಘಗಳ 36ನೇ ರಾಷ್ಟ್ರೀಯ ಭೂಮಾಪನಾ ದಿನಾಚರಣೆಯ ಸಂದರ್ಭದಲ್ಲಿ ಮಾತನಾಡಿದ ಕಂದಾಯ ಸಚಿವರು ಇಲಾಖೆಯು ಕಳೆದ 02 ವರ್ಷಗಳ ಅವಧಿಯಲ್ಲಿ ಸಾಕಷ್ಟು ಸಾಧನೆ ಮತ್ತು ಸುಧಾರಣಾ ಕ್ರಮಗಳನ್ನು ಜಾರಿಗೆ ತರುವ ಮೂಲಕ ಸಾರ್ವಜನಿಕ ಸೇವೆಯ ಬಲವರ್ಧನೆಗೆ ಕಾರಣವಾಗಿದೆ. ಅಧುನಿಕ ತಂತ್ರಜ್ಞಾನ ಆಧಾರಿತಡ್ರೋನ್ ಸರ್ವೆ ಕಾರ್ಯ. ಭೂಮಾಪನದ ನಿಖರತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ 49 CORS ಕೇಂದ್ರಗಳ ಸ್ಥಾಪನೆ, ರಾಜ್ಯದಲ್ಲಿ ಪ್ರಪ್ರಥಮವಾಗಿ ಅಳತೆಯಾಗದೇ ಇರುವ ಗ್ರಾಮೀಣ ಜನವಸತಿ ಪ್ರದೇಶಗಳ ಆಸ್ತಿಗಳಿಗೆ ಡೋಣ್ ಸರ್ವೆ. ರಾಜ್ಯದ ಆಯ್ದ 10 ನಗರಸಭೆ/ಪಟ್ಟಣ ಪಂಚಾಯಿತಿಗಳ ಆಸ್ತಿಗಳಿಗೆ ಡೋಣ್ ಸರ್ವೆ, ಭೂದಾಖಲೆಗಳ ಗಣಕೀಕರಣ ಕಾರ್ಯ, ಹೀಗೆ ಸಾಕಷ್ಟು ಸಾಧನೆಗಳನ್ನು ಸಾಧಿಸಿ ಇತರೆ ಇಲಾಖೆಗಳಿಗೆ ಮಾದರಿ ಇಲಾಖೆಯಾಗಿದೆ. ಇಲಾಖೆಯಲ್ಲಿ ಭೂಮಿಯ ಅಳತೆಗೆ ಸಂಬಂಧಿಸಿದ ಸೇವೆಗಳನ್ನು ಸಾರ್ವಜನಿಕರಿಗೆ ಮತ್ತು ಇತರ ಇಲಾಖೆಗಳಿಗೆ ಬದಗಿಸುವ ನಿಟ್ಟಿನಲ್ಲಿ ಪ್ರತಿ ತಿಂಗಳು ಅಳತೆ ಕೋರಿ ಸ್ವೀಕೃತವಾಗುವ ಸರಾಸರಿ 1.3 ಲಕ್ಷ ಅರ್ಜಿಗಳ ವಿಲೇವಾರಿ ಮಾಡಲಾಗುತ್ತಿದೆ. ಪ್ರತಿನಿತ್ಯ 5000 ದಿಂದ 6000 ಅಳತೆ ಕಾರ್ಯ. ಎರಡು ವರ್ಷಗಳಲ್ಲಿ 26 ಲಕ್ಷಕ್ಕೂ ಹೆಚ್ಚಿನ ಅರ್ಜಿಗಳ ವಿಲೇವಾರಿ. ಅರ್ಜಿ ವಿಲೇವಾರಿ ಅವಧಿಯನ್ನು ಹಿಂದೆ ತೆಗೆದುಕೊಳ್ಳಲಾಗುತ್ತಿದ್ದ ಸರಾಸರಿ 03 ರಿಂದ 06 ತಿಂಗಳಿಂದ 30 ದಿನಗಳ ಒಳಗಾಗಿ ತ್ವರಿತ ಸೇವೆ ಒದಗಿಸಲಾಗುತ್ತಿದೆ ಎಂದರು.

ಡ್ರೋಣ್ ಆಧಾರಿತ ಮರು ಭೂಮಾಪನ

ಪ್ರಪ್ರಥಮ ಬಾರಿಗೆ ಅಧುನಿಕ ತಂತ್ರಜ್ಞಾನ ಆಧಾರಿತ ಡ್ರೋಣ್ ಸರ್ವೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ   ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕು ಉಯ್ಯಂಬಳ್ಳಿ ಹೋಬಳಿಯ ಎಲ್ಲಾ 33 ಗ್ರಾಮಗಳಲ್ಲ ಮರುಭೂಮಾಪನದಡಿ 23,000 ಡ್ರೋಣ್ ಆರ್.ಟಿ.ಸಿಗಳನ್ನು ವಿತರಿಸಲಾಗಿರುತ್ತದೆ. ಕೇಂದ್ರ ಸರ್ಕಾರದ ಸಹಯೋಗದೊಂದಿಗೆ “ನಕ್ಷಾ” ಯೋಜನೆಯಡಿಯಲ್ಲಿ ಪ್ರಾರಂಭಿಕವಾಗಿ ರಾಜ್ಯದ 10 ನಗರಸಭೆ /ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಆಸ್ತಿಗಳನ್ನು ಆಧುನಿಕ ತಂತ್ರಜ್ಞಾನ ಡ್ರೋಣ್/ವೈಮಾನಿಕ ಸರ್ವೆ ಕೈಗೊಂಡು ಡಿಜಿಟಲ್ ಮಾಧ್ಯಮದಲ್ಲಿ ಆಸ್ತಿ ದಾಖಲೆಗಳನ್ನು ಸಿದ್ದಪಡಿಸಲಾಗುತ್ತಿದೆ ಎಂದರು.

ಸರಳೀಕೃತ ದರಖಾಸ್ತು ಪೋಡಿ ಅಭಿಯಾನ

ರಾಜ್ಯ ಸರ್ಕಾರದ 2024-25 ನೇ ಸಾಲಿನ ಆಯವ್ಯಯ ಪ್ಯಾರಾ 395 ರ ಘೋಷಣೆ-ದರಖಾಸ್ತು ಪೋಡಿ ಅಭಿಯಾನದಡಿ ರೈತರ ಜಮೀನಿನ ದುರಸ್ತಿ ಪ್ರಕ್ರಿಯೆಯನ್ನು ಸುಗಮಗೊಳಿಸಲು, ಯಾವುದೇ ತಕರಾರು ಇಲ್ಲದೆ ಇರುವ ಜಮೀನುಗಳಿಗೆ ಸರ್ಕಾರದಿಂದ ಸ್ವಯಂ ಪ್ರೇರಿತವಾಗಿ 1 ರಿಂದ 5 ರ ವರೆಗಿನ ದಾಖಲೆಗಳನ್ನು ಸಿದ್ಧಪಡಿಸಲಾಗುವುದು. ಈ ಹಿಂದೆ ಪೋಡಿಗೆ ಅಗತ್ಯವಿದ್ದ ಕನಿಷ್ಠ 5 ದಾಖಲೆಗಳನ್ನು 3 ಕ್ಕೆ ಇಳಿಸಲಾಗಿದೆ.  ಸಂಪೂರ್ಣ ಪ್ರಕ್ರಿಯೆ ಆನ್ ಲೈನ್ ಮೂಲಕ ನೈಜತೆ/ಅರ್ಹ ಪ್ರಕರಣಗಳಿಗೆ 30 ದಿನಗಳೊಳಗೆ ಅಳತೆ ಮತ್ತು ದುರಸ್ತಿ. ಸರಳೀಕರಣ ಆದೇಶ ಜಾರಿಯಾದ ನಂತರದ ನಾಲ್ಕು ತಿಂಗಳ ಅವಧಿಯಲ್ಲಿ 20000ಕ್ಕೂ ಹೆಚ್ಚಿನ ವಿಲೇವಾರಿ ಕಳೆದ 3 ವರ್ಷಗಳ ವಿಲೇವಾರಿ 5813.  ಈ ಹಿಂದೆ ಸರ್ಕಾರವು 2015 ರಲ್ಲಿ ಪ್ರಾರಂಭಿಸಿದ್ದ ಪೋಡಿ ಮುಕ್ತ ಗ್ರಾಮ ಅಭಿಯಾನದಲ್ಲಿ 16630 ಗ್ರಾಮಗಳನ್ನು ಪೋಡಿ ಮುಕ್ತವನ್ನಾಗಿಸಲಾಗಿತ್ತು. ಈಗ ಪುನಃ 2024 ರ ಆಯವ್ಯಯ ಘೋಷಣೆಯಂತೆ ಪೋಡಿ ಮುಕ್ತ ಗ್ರಾಮ ಅಭಿಯಾನ 2.0 ವನ್ನು ಮೋಜಿಣಿ ತಂತ್ರಾಂಶದ ಮೂಲಕ ಪ್ರಾರಂಭಿಸಿ, ಈವರೆಗೆ 6925 ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಕಳೆದ ಒಂದು ವರ್ಷದ ಅವಧಿಯಲ್ಲಿ 2079 ಗ್ರಾಮಗಳನ್ನು ಪೋಡಿ ಮುಕ್ತಗೊಳಿಸಲಾಗಿರುತ್ತದೆ. ಫಲಾನುಭವಿಗಳಿಗೆ ಪ್ರತ್ಯೇಕ ಪಹಣಿ ವಿತರಿಸಲಾಗಿದೆ ಎಂದರು.

ಪ್ರಪ್ರಥಮ ಬಾರಿಗೆ ಗ್ರಾಮಠಾಣ ಪ್ರದೇಶದ ಸರ್ವೆ- ಐತಿಹಾಸಿಕ ಘಟ್ಟ

ರಾಜ್ಯದಲ್ಲಿರುವ ಸುಮಾರು 30,700 ಗ್ರಾಮ ಠಾಣಾ ಪ್ರದೇಶಗಳನ್ನು ಹಂತ ಹಂತವಾಗಿ ಡ್ರೋಣ್ ಮುಖಾಂತರ ಸರ್ವೆ ಮಾಡಿಸಿ ಆಸ್ತಿ ಮತ್ತು ಹಕ್ಕು ದಾಖಲಾತಿಗಳನ್ನು ಭೂ ಮಾಲೀಕರಿಗೆ ವಿತರಿಸುವ ಯೋಜನೆಯನ್ನು ರಾಜ್ಯಾದ್ಯಂತ ವಿತರಿಸಲಾಗುವುದು.  ಆಕಾರ್ ಬಂದ್ ಮತ್ತು ಆರ್.ಟಿ.ಸಿಯಲ್ಲಿನ ವಿಸ್ತೀರ್ಣವನ್ನು ಹೊಂದಾಣಿಕೆ ಮಾಡುವ ಮೂಲಕ ಹಿಡುವಳಿದಾರರಿಗೆ ತ್ವರಿತ ಸೇವೆ ಒದಗಿಸಲು ಆಕಾರ್ ಬಂದ್ ಗಳ ಕಾರ್ಯವನ್ನು ಕೈಗೊಳ್ಳಲಾಗುವುದು. ಸುಮಾರು 1.34 ಕೋಟಿ ಸರ್ವೆ ಸ್ಕೆಚ್ (ಹಿಸ್ಸಾ)ಗಳನ್ನು ಗಣಕೀಕರಣಗೊಳಿಸಿ ಸಾರ್ವಜನಿಕರಿಗೆ ಮುಕ್ತವಾಗಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.

 ಭೂಮಾಪನ ಕಾರ್ಯಕ್ಕೆ ಅಧುನಿಕ ಉಪಕರಣಗಳ ಸ್ಪರ್ಶ

ರಾಜ್ಯದಲ್ಲಿ ಭೂಮಾಪನದ ನಿಖರತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ 49 CORS (Continuously Operating Reference Station) ಕೇಂದ್ರಗಳ ಸ್ಥಾಪನೆ. ತ್ವರಿತ, ನಿಖರ ಹಾಗೂ ಡಿಜಿಟಲ್ ಮಾಧ್ಯದಲ್ಲಿ ಭೂಮಾಪನ ಕಾರ್ಯಕ್ಕಾಗಿ ಈ ಹಿಂದೆ ಬಳಸಲಾಗುತ್ತಿದ್ದ ಸಾಂಪ್ರದಾಯಿಕ ಸರ್ವೆ ಉಪಕರಣಗಳ ಬದಲಿಗೆ ರೋವರ್ ಮೂಲಕ ಕೈಗೊಳ್ಳಲು ಈಗಾಗಲೇ 600 ರೋವರ್ ಗಳನ್ನು ಒದಗಿಸಲಾಗಿರುತ್ತದೆ. ಸರ್ಕಾರವು ಇನ್ನೂ 5,000 ರೋವರ್ಗಳನ್ನು ಖರೀದಿಸಲು ಸರ್ಕಾರದ ಅನುಮೋದನೆ ದೊರಕಿದ್ದು ಹಂತ ಹಂತವಾಗಿ ರೋವರ್ ಗಳನ್ನು ಖರೀದಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಶಾಸಕ ರಿಜ್ವಾನ್ ಅರ್ಷದ್, ಕಂದಾಯ ಸಚಿವ ಕೃಷ್ಣಬೈರೇಗೌಡ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್  ಅಹಮದ್, ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಠಾರಿಯಾ, ಐ.ಎ.ಎಸ್, ಸರ್ಕಾರದ ಮುಖ್ಯ ಸಚೇತಕ ಅಶೋಕ್ಪಟ್ಟಣ್ , ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯ ಆಯುಕ್ತ ಜೆ. ಮಂಜುನಾಥ್  ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.

Share the Post:

Related Posts

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಕಂಪನಿಯಿಂದ ಬಿಝ್ಇಂಟೆಲ್ ಹಬ್ ಸ್ಥಾಪನೆ

ಬೆಂಗಳೂರು: ಡಾಬಸ್‌ಪೇಟೆ – ದೊಡ್ಡಬಳ್ಳಾಪುರ ನಡುವೆ ರಾಜ್ಯ ಸರ್ಕಾರವು ಅಭಿವೃದ್ಧಿಪಡಿಸುತ್ತಿರುವ ಮಹತ್ವಾಕಾಂಕ್ಷಿ ಕ್ವಿನ್ ಸಿಟಿಯಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಕಂಪನಿಯು 1,200 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಜಾಗತಿಕ

Read More

ಇಂದಿನಿಂದ ರಾಜ್ಯದಾದ್ಯಂತ ಅತ್ಯಾಧುನಿಕ ಆ್ಯಂಬುಲೆನ್ಸ್ ಸೇವೆ ಲಭ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಇಂದಿನಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಆ್ಯಂಬುಲೆನ್ಸ್ ಸೇವೆ ಲಭ್ಯವಾಗಲಿದ್ದು, ಈ ಸೇವೆ ಪರಿಣಾಮಕಾರಿಯಾಗಿ ಜನರಿಗೆ ತಲುಪಬೇಕು ಎನ್ನುವುದು ನನ್ನ ಆಶಯ ಎಂದು ಮುಖ್ಯಮಂತ್ರಿ

Read More

ನಿಮ್ಮ ಅಹವಾಲು

ಮುಖ್ಯಮಂತ್ರಿಗಳಿಗೆ ನಿಮ್ಮ ದೂರನ್ನು ತಲುಪಿಸಲು ಈ ಕೆಳಗಿನ ಅರ್ಜಿಯನ್ನು ತುಂಬಿ