ಕರಗದ ಬೆಳಕಿನಲ್ಲಿ, ಕನ್ನಡ ಸಂಸ್ಕೃತಿಯ ಬೆಳಕು!

ಸಂಡೂರು ಉಪ ಚುನಾವಣೆ| ಮುಖ್ಯಮಂತ್ರಿಗಳ ಬಿರುಸಿನ ಪ್ರಚಾರ, 3ದಿನ, 18 ಬಹಿರಂಗ ಸಭೆ

ನವೆಂಬರ್ 13ರಂದು ನಡೆಯಲಿರುವ ಉಪಚುನಾವಣೆಯ ಹಿನ್ನೆಲೆಯಲ್ಲಿ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಿರುಸಿನ ಪ್ರಚಾರ ನಡೆಸಿದರು.

ನವೆಂಬರ್ 13ರಂದು ನಡೆಯಲಿರುವ ಉಪಚುನಾವಣೆಯ ಹಿನ್ನೆಲೆಯಲ್ಲಿ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಿರುಸಿನ ಪ್ರಚಾರ ನಡೆಸಿದರು.

ಮೂರು ದಿನಗಳ ಕಾಲ ನಿರಂತರ ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡ ಮುಖ್ಯಮಂತ್ರಿಗಳು 18 ಬಹಿರಂಗ ಸಭೆಗಳಲ್ಲಿ ಭಾಗಿಯಾಗುವ ಮೂಲಕ ರಾಜಕೀಯ ನಾಯಕರಲ್ಲಿ ಬೆರಗು ಮೂಡಿಸಿದ್ದಾರೆ.

  • ಬಹಿರಂಗ ಸಭೆಗಳಲ್ಲಿ ನೇರವಾಗಿ ಭಾಗವಹಿಸಿ ಮುಖ್ಯಮಂತ್ರಿಗಳ ಭಾಷಣ ಕೇಳಿದ ಮತದಾರರ ಸಂಖ್ಯೆ 1.10 ರಿಂದ 1.23 ಲಕ್ಷ.
  • (ಪ್ರತೀ ಸಭೆಯಲ್ಲಿ ಕನಿಷ್ಠ 3000 ದಿಂದ ಗರಿಷ್ಠ 15000 ವರೆಗೂ ಜನ ಸೇರಿದ್ದರು)
  • 28 ಗ್ರಾಮ ಪಂಚಾಯ್ತಿ, 3 ಪುರಸಭೆ, 1 ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಸಂಪೂರ್ಣವಾಗಿ ಮುಖ್ಯಮಂತ್ರಿಗಳು ಮತಯಾಚನೆ ಮಾಡಿ ಮತದಾರರನ್ನು ನೇರವಾಗಿ ತಲುಪಿದ್ದಾರೆ.
  • ಸಂಡೂರು ವಿಧಾನಸಭಾ ಕ್ಷೇತ್ರದ ಶೇ70 ರಷ್ಟು ಭೂ ಭಾಗದಲ್ಲಿ ಪ್ರಚಾರ
  • ಒಟ್ಟು 3 ದಿನಗಳಲ್ಲಿ ಪ್ರಯಾಣಿಸಿದ್ದು ಅಂದಾಜು 320 ಕಿಲೋ ಮೀಟರ್.
  • ರೈತರು ಮತ್ತು ಭೂ ಹೀನರು ಕಳೆದ 652 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೇ ಹೋಗಿ ಅವರ ಅಹವಾಲು ಕೇಳಿ, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
  • ನಾನಾ ಕಾರಣಗಳಿಂದ ಮುನಿಸಿಕೊಂಡಿದ್ದ ನಾಲ್ಕು ಮಂದಿ ಸ್ಥಳೀಯ ನಾಯಕರ ಮನೆಗಳಿಗೇ ಭೇಟಿ ನೀಡಿ ಅವರ ಮನವೊಲಿಸಿ ತಮ್ಮ ಜೊತೆ ಸಕ್ರಿಯವಾಗಿ ಪ್ರಚಾರದಲ್ಲಿ ತೊಡಗಿಸಿಕೊಳ್ಳುವಲ್ಲಿ ಯಶಸ್ವಿ ಆಗಿದ್ದು.
  • ಸಂಡೂರು ಕ್ಷೇತ್ರದಲ್ಲಿ ಬಿಜೆಪಿ ಪರಿವಾರ ಹರಡಿದ್ದ ಪ್ರತಿಯೊಂದು ಸುಳ್ಳುಗಳನ್ನೂ ಉಲ್ಲೇಖಿಸಿ ಅಧಿಕೃತ ಅಂಕಿ-ಅಂಶಗಳ ಸಮೇತ ಸ್ಪಷ್ಟನೆ ನೀಡಿ ಸತ್ಯ ಸಂಗತಿಗಳ ಮನವರಿಕೆ ಮಾಡಿಸಲಾಯ್ತು.
  • ಜನಾರ್ಧನರೆಡ್ಡಿಯವರು ಮತ್ತೆ ಬಳ್ಳಾರಿಗೆ ಬಂದಿದ್ದರಿಂದ ಆಗುತ್ತಿರುವ ಬೆಳವಣಿಗೆಗಳಿಂದ ಮತ್ತೆ ಭಯದ ವಾತಾವರಣ ಸೃಷ್ಟಿಯಾಗಬಹುದು ಎಂದು ಹೆದರಿದ್ದ ಉದ್ಯಮಪತಿಗಳು ಹಾಗೂ ಜನತೆಗೆ ಆತ್ಮಸ್ಥೈರ್ಯ ನೀಡಿದ್ದು.
Share the Post:

Related Posts

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಕಂಪನಿಯಿಂದ ಬಿಝ್ಇಂಟೆಲ್ ಹಬ್ ಸ್ಥಾಪನೆ

ಬೆಂಗಳೂರು: ಡಾಬಸ್‌ಪೇಟೆ – ದೊಡ್ಡಬಳ್ಳಾಪುರ ನಡುವೆ ರಾಜ್ಯ ಸರ್ಕಾರವು ಅಭಿವೃದ್ಧಿಪಡಿಸುತ್ತಿರುವ ಮಹತ್ವಾಕಾಂಕ್ಷಿ ಕ್ವಿನ್ ಸಿಟಿಯಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಕಂಪನಿಯು 1,200 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಜಾಗತಿಕ

Read More

ಇಂದಿನಿಂದ ರಾಜ್ಯದಾದ್ಯಂತ ಅತ್ಯಾಧುನಿಕ ಆ್ಯಂಬುಲೆನ್ಸ್ ಸೇವೆ ಲಭ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಇಂದಿನಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಆ್ಯಂಬುಲೆನ್ಸ್ ಸೇವೆ ಲಭ್ಯವಾಗಲಿದ್ದು, ಈ ಸೇವೆ ಪರಿಣಾಮಕಾರಿಯಾಗಿ ಜನರಿಗೆ ತಲುಪಬೇಕು ಎನ್ನುವುದು ನನ್ನ ಆಶಯ ಎಂದು ಮುಖ್ಯಮಂತ್ರಿ

Read More

ನಿಮ್ಮ ಅಹವಾಲು

ಮುಖ್ಯಮಂತ್ರಿಗಳಿಗೆ ನಿಮ್ಮ ದೂರನ್ನು ತಲುಪಿಸಲು ಈ ಕೆಳಗಿನ ಅರ್ಜಿಯನ್ನು ತುಂಬಿ