ಕರಗದ ಬೆಳಕಿನಲ್ಲಿ, ಕನ್ನಡ ಸಂಸ್ಕೃತಿಯ ಬೆಳಕು!

ಲೋಕಸಭಾ ಅಭ್ಯರ್ಥಿ ಲಕ್ಷ್ಮಣ್ ನಮ್ಮ-ನಿಮ್ಮೆಲ್ಲರ ಧ್ವನಿ, ಇವರ ಗೆಲುವು ಖಚಿತ: ಸಿ.ಎಂ.ಸಿದ್ದರಾಮಯ್ಯ

ನಿರುದ್ಯೋಗ ಸಮಸ್ಯೆ ಬಗ್ಗೆ, ಬೆಲೆ ಏರಿಕೆ ಬಗ್ಗೆ, ಗೊಬ್ಬರದ ಬೆಲೆ ದುಬಾರಿಯಾಗಿರುವ ಬಗ್ಗೆ ಬಾಯಿಯನ್ನೇ ಬಿಟ್ಟಿಲ್ಲ . ಪತ್ರಕರ್ತರಿಗೆ ಹೆದರಿ ಇವತ್ತಿನವರೆಗೂ ಒಂದೇ ಒಂದು ಪತ್ರಿಕಾಗೋಷ್ಠಿಯನ್ನೂ ನಡೆಸದ ಏಕೈಕ ಪ್ರಧಾನಮಂತ್ರಿ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ನಿರ್ಮಲಾ ಸೀತಾರಾಮನ್ ಅವರಿಗೆ ಬಹಿರಂಗ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಪಂಥಾಹ್ವಾನ: ದಾಖಲೆಗಳ ಸಮೇತ ಕನ್ನಡಿಗರ ಎದುರು ಚರ್ಚೆಗೆ ಬನ್ನಿ. ನೀವು ಕರೆದ ಜಾಗಕ್ಕೆ ನಾನು ಬರ್ತೀನಿ. ನೀವು ರೆಡಿನಾ ?

ಬಿಜೆಪಿ ಶೂದ್ರರ, ಮಹಿಳೆಯರ ದಲಿತರ, ದುಡಿಯುವ ವರ್ಗಗಳ, ಶ್ರಮಿಕರ, ಸಂವಿಧಾನ ಮತ್ತು ಸಾಮಾಜಿಕ ನ್ಯಾಯದ ಶತ್ರು: ಶೂದ್ರರು ರಾಜಕೀಯ ಸ್ವಾರ್ಥಕ್ಕಾಗಿ ಬಿಜೆಪಿಯಲ್ಲಿದ್ದಾರೆ ಅಷ್ಟೆ: ಸಿಎಂ ಸಿದ್ದರಾಮಯ್ಯ

ನುಡಿದಂತೆ ನಡೆದು ಜನರ ಬದುಕಿಗೆ ಸ್ಪಂದಿಸುವುದು ನಮ್ಮ ಕಾಂಗ್ರೆಸ್ ಸಂಸ್ಕಾರ: ಜನರನ್ನು ಕೇಳವ ಭಾವನಾತ್ಮಕವಾಗಿ ಕೆರಳಿಸಿ ಅವರ ಬದುಕಿಗೆ ವಂಚಿಸುವುದು ಬಿಜೆಪಿ ಸಂಸ್ಕಾರ: ಸಿ.ಎಂ ಟೀಕಾಪ್ರಹಾರ

56 ಇಂಚಿನ ಎದೆ ಇರೋದಲ್ಲ ಮುಖ್ಯ. ಎದೆಯೊಳಗೆ ಹೃದಯ ಇರಬೇಕು. ಆ ಹೃದಯಕ್ಕೆ ರೈತರ, ಕಾರ್ಮಿಕರ, ವಿದ್ಯಾರ್ಥಿ ಯುವಜನರ ಪರವಾದ ತಾಯಿ ಕರುಳು ಇರಬೇಕು: ಸಿ.ಎಂ ವ್ಯಂಗ್ಯ

ಲೋಕಸಭಾ ಅಭ್ಯರ್ಥಿ ಲಕ್ಷ್ಮಣ್ ನಿಮ್ಮೆಲ್ಲರ ಧ್ವನಿ. ನಮ್ಮೆಲ್ಲರ ಧ್ವನಿ. ಇವರು ಗೆಲ್ಲುವುದು ಖಚಿತ. ಲಕ್ಷ್ಮಣ್ ಗೆದ್ದರೆ ನಾನು, ನೀವು ಗೆದ್ದಂತೆ ಎಂದು ಸಿ.ಎಂ.ಸಿದ್ದರಾಮಯ್ಯ ಕರೆ ನೀಡಿದರು.

ಮೈಸೂರು ನಗರದ ಇಂದಿರಗಾಂಧಿ ಕಾಂಗ್ರೆಸ್ ಭವನದ ಮೈದಾನದಲ್ಲಿ ಇಂದು ಆಯೋಜಿಸಿದ್ದ, ಚಾಮರಾಜ, ಕೃಷ್ಣರಾಜ , ನರಸಿಂಹರಾಜ ಹಾಗೂ ಚಾಮುಂಡೇಶ್ವರಿ ಕ್ಷೇತ್ರಗಳ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ನುಡಿದಂತೆ ನಡೆದು ಜನರ ಬದುಕಿಗೆ ಸ್ಪಂದಿಸುವುದು ನಮ್ಮ ಕಾಂಗ್ರೆಸ್ ಸಂಸ್ಕಾರ. ಜನರನ್ನು ಕೇವಲ ಭಾವನಾತ್ಮಕವಾಗಿ ಕೆರಳಿಸಿ ಅವರ ಬದುಕಿಗೆ ವಂಚಿಸುವುದು ಬಿಜೆಪಿ ಸಂಸ್ಕಾರ. ಬಿಜೆಪಿಯನ್ನು ನಿರಂತರವಾಗಿ ಸೈದ್ಧಾಂತಿಕವಾಗಿ ವಿರೋಧಿಸುತ್ತಾ ಬೀದಿ ಹೋರಾಟಗಳ ಮೂಲಕ ಬೆಳೆದವರು ಲಕ್ಷ್ಮಣ್ ಎಂದು ಮೆಚ್ಚುಗೆ ಸೂಚಿಸಿದರು.

ಬರೀ 56 ಇಂಚಿನ ಎದೆ ಇರೋದಲ್ಲ. ಎದೆಯೊಳಗೆ ಹೃದಯ ಇರಬೇಕು. ಆ ಹೃದಯಕ್ಕೆ ರೈತರ, ಕಾರ್ಮಿಕರ, ವಿದ್ಯಾರ್ಥಿ ಯುವಜನರ ಪರವಾದ ತಾಯಿ ಕರುಳು ಇರಬೇಕು ಎಂದು ವ್ಯಂಗ್ಯವಾಡಿದರು.

ಸಾಮಾಜಿಕ ನ್ಯಾಯ, ಸಂವಿಧಾನ ರಕ್ಷಣೆ, ಸರ್ವರ ಅಭಿವೃದ್ಧಿ, ಅನ್ನ-ಅಕ್ಷರ-ಆಸರೆ-ಆರೋಗ್ಯ-ವಸತಿ ಜತೆಗೆ ಸಾಮಾಜಿಕ ಪ್ರಗತಿಗೆ ನಿಷ್ಠವಾಗಿರುವ ಏಕೈಕ ರಾಷ್ಟ್ರೀಯ ಪಕ್ಷ ಕಾಂಗ್ರೆಸ್. ಬಿಜೆಪಿ ಇದಕ್ಕೆ ವಿರುದ್ಧವಾದ ಮಹಿಳೆಯರ, ದಲಿತರ, ಶೂದ್ರರ ಮತ್ತು ದುಡಿಯುವವರ, ಶ್ರಮಿಕರ ವಿರೋಧಿಯಾದ ಶ್ರೀಮಂತರ ಪರವಾದ ಪಕ್ಷ ಎಂದರು.‌

ಬಿಜೆಪಿಯ ಹುಟ್ಟು ಮತ್ತು ಇತಿಹಾಸವನ್ನು ಸರಿಯಾಗಿ ಗಮನಿಸಿ. ಬಿಜೆಪಿ ತನ್ನ ಆಚರಣೆಯಲ್ಲಿ ಬಹುಸಂಖ್ಯಾತರ ವಿರೋಧಿಯಾದ ಪಕ್ಷ. ಶೂದ್ರರು, ದಲಿತರನ್ನು ಸಮಸ್ತ ಮಹಿಳೆಯರನ್ನು ಅಕ್ಷರ ಸಂಸ್ಕೃತಿಯಿಂದ, ಶಿಕ್ಷಣದಿಂದ ದೂರ ಇಡಬೇಕು ಎನ್ನುವುದು ಮನುಸ್ಮೃತಿಯ ಸಿದ್ಧಾಂತ. ಈ ಸಿದ್ಧಾಂತ ಅಸಮಾನತೆಯನ್ನು, ಜಾತಿ ತಾರತಮ್ಯವನ್ನು ಸ್ಪಷ್ಟವಾಗಿ ಬೆಂಬಲಿಸುತ್ತದೆ. ಆದ್ದರಿಂದ ಇದು ಭಾರತದ ಬಹು ಸಂಖ್ಯಾತ ದುಡಿಯುವ ವರ್ಗಗಳ ವಿರೋಧಿಯಾದ ಪಕ್ಷ ನೆರೆದಿದ್ದ ಕಾರ್ಯಕರ್ತರಿಗೆ ಮನವರಿಕೆ ಮಾಡಿಸಿದರು.

ಮೋದಿಯವರು ಇಡಿ ದೇಶದ ಜನರಿಗೆ ಹೇಳಿದ ಸುಳ್ಳುಗಳು ನಿಮಗೆ ಗೊತ್ತಿಲ್ಲವೇ? ಮೋದಿಯವರು ಕಳೆದ 10 ವರ್ಷಗಳಲ್ಲಿ ಒಂದೇ ಒಂದು ದಿನ ಈ ದೇಶದ ನಿರುದ್ಯೋಗ ಸಮಸ್ಯೆ ಬಗ್ಗೆ, ಬೆಲೆ ಏರಿಕೆ ಬಗ್ಗೆ, ಗೊಬ್ಬರದ ಬೆಲೆ ದುಬಾರಿಯಾಗಿರುವ ಬಗ್ಗೆ ಬಾಯಿಯನ್ನೇ ಬಿಟ್ಟಿಲ್ಲ . ಪತ್ರಕರ್ತರಿಗೆ ಹೆದರಿ ಇವತ್ತಿನವರೆಗೂ ಒಂದೇ ಒಂದು ಪತ್ರಿಕಾಗೋಷ್ಠಿಯನ್ನೂ ನಡೆಸದ ಏಕೈಕ ಪ್ರಧಾನಮಂತ್ರಿ ಎಂದು ವ್ಯಂಗ್ಯವಾಡಿದರು.

ದೇವರ ಹೆಸರಲ್ಲಿ, ಧರ್ಮದ ಹೆಸರಲ್ಲಿ, ಜಾತಿ ಹೆಸರಲ್ಲಿ ವೈಷಮ್ಯ ಸೃಷ್ಟಿಸುವ ರಾಜಕಾರಣ ಬಹಳ ಸುಲಭ. ಆದರೆ, ಉದ್ಯೋಗ ಸೃಷ್ಟಿ ಮಾಡುವುದು, ಈ ದೇಶದ ಬಹುಸಂಖ್ಯಾತರ ಬದುಕಿಗೆ ಸ್ಪಂದಿಸುವ ಕಾರ್ಯಕ್ರಮಗಳನ್ನು ರೂಪಿಸುವುದಕ್ಕೆ ಜನಪರವಾದ ಕಾಳಜಿ ಬೇಕು. ಅಭಿವೃದ್ಧಿ ಪಥದಲ್ಲಿ ದೇಶ ಮುನ್ನಡೆಸುವುದು ಗೊತ್ತಿರಬೇಕು. ಪ್ರಧಾನಿ ಮೋದಿಯವರಿಂದ ಇದು ಸಾಧ್ಯವಾಗಿಲ್ಲ ಎಂದರು.

ಅದಾನಿ, ಅಂಬಾನಿ ಪರವಾಗಿ ಇದ್ದರೆ ಈ ದೇಶದ ದುಡಿಯುವ ವರ್ಗಗಳು, ಯುವಕ, ಯುವತಿಯರ ಭವಿಷ್ಯ ರೂಪಿಸುವುದಾದರೂ ಹೇಗೆ ? ಇದು ನಾಡಿನ ಜನತೆ ಅರ್ಥ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ಕೆಪಿಸಿಸಿ ಅಧ್ಯಕ್ಷರರಾದ ಉಪ ಮುಖ್ಯಮಂತ್ರಿ ಶ್ರೀ ಡಿ.ಕೆ ಶಿವಕುಮಾರ್, ಕಾರ್ಯಾಧ್ಯಕ್ಷರಾದ ಶ್ರೀ ತನ್ವೀರ್ ಸೇಠ್, ಸಚಿವರಾದ ಕೆ.ವೆಂಕಟೇಶ್, ಶಾಸಕರುಗಳಾದ ಕೆ.ಹರೀಶಗೌಡ, ಅನಿಲ್ ಚಿಕ್ಕಮಾದು, ಆಶ್ರಯ ಸಮಿತಿ ಅಧ್ಯಕ್ಷರಾದ ಮಾಜಿ ಶಾಸಕರಾದ ಯತೀಂದ್ರ ಸಿದ್ದರಾಮಯ್ಯ, ಎಂ.ಕೆ.ಸೋಮಶೇಖರ್, ಗ್ಯಾರಂಟಿ ಕಾರ್ಯಕ್ರಮಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಪುಷ್ಪ ಅಮರನಾಥ್, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂ.ಲಕ್ಷ್ಮಣ್ ಸೇರಿದಂತೆ, ಮಾಜಿ ಶಾಸಕರು, ಮಾಜಿ ಸಚಿವರು, ಜಿಲ್ಲಾ ಮತ್ತು ತಾಲ್ಲೂಕು ಹಾಗೂ ಬೂತ್ ಮುಖಂಡರುಗಳು ಉಪಸ್ಥಿತರಿದ್ದರು.

ಮುಖ್ಯಮಂತ್ರಿಗಳ ಭಾಷಣದ ಇತರೆ ಹೈಲೈಟ್ಸ್

  • ಅಲ್ರೀ ಬರೀ ಡೈಲಾಗ್ ಹೊಡ್ಕೊಂಡು 10 ವರ್ಷ ಮುಗಿಸಿದ್ರಲ್ಲಾ ಇದು ದೇಶದ ಜನರಿಗೆ ಮಾಡಿದ ಅವಮಾನ ಅಲ್ವಾ?
  • ನಿಮ್ಮ ಅಕೌಂಟಿಗೆ 15 ಲಕ್ಷ ಹಾಕ್ತೀನಿ ಅಂದ್ರು. 15 ಪೈಸೆನಾದ್ರೂ ಹಾಕಿದ್ರಾ?
  • ನಮ್ಮ ಗ್ಯಾರಂಟಿ ಯೋಜನೆಗಳಿಗೆ ಕೇಂದ್ರದಿಂದ, ನಿರ್ಮಲಾ ಸೀತಾರಾಮನ್ ಒಂದೇ ಒಂದು ಪೈಸೆ ಕೊಡೋದು ಬೇಡ. ಕನ್ನಡಿಗರ ಪಾಲಿನ ತೆರಿಗೆ ಪಾಲು ಕೊಟ್ಟರೆ ಸಾಕು
  • ಒಂದು ವರ್ಷಕ್ಕೆ ಕನ್ನಡಿಗರು ಒಂದು ಲಕ್ಷದ 30 ಸಾವಿರ ಕೋಟಿ ರೂಪಾಯಿ ಕೇಂದ್ರಕ್ಕೆ ಕೊಡ್ತಾರೆ. ಇದರಲ್ಲಿ ಕನ್ನಡಿಗರಿಗೆ ವಾಪಾಸ್ ಬರುವುದು ಕೇವಲ 53 ಸಾವಿರ ಕೋಟಿ. ಈ ಅನ್ಯಾಯವನ್ನು ಸರಿ ಮಾಡಿ ಕನ್ನಡಿಗರ ಕೂಗಿಗೆ, ಕನ್ನಡಿಗರ ಶ್ರಮಕ್ಕೆ ಬೆಲೆ ಕೊಡಿ
  • ನಿರ್ಮಲಾ ಸೀತಾರಾಮನ್ ಅವರಿಗೆ ಬಹಿರಂಗ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಪಂಥಾಹ್ವಾನ: ದಾಖಲೆಗಳ ಸಮೇತ ಜನರೆದುರು, ಕನ್ನಡಿಗರ ಎದುರು ಚರ್ಚೆಗೆ ಬನ್ನಿ. ನೀವು ಕರೆದ ಜಾಗಕ್ಕೆ ನಾನು ಬರ್ತೀನಿ. ನೀವು ರೆಡಿನಾ ?
Share the Post:

Related Posts

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಕಂಪನಿಯಿಂದ ಬಿಝ್ಇಂಟೆಲ್ ಹಬ್ ಸ್ಥಾಪನೆ

ಬೆಂಗಳೂರು: ಡಾಬಸ್‌ಪೇಟೆ – ದೊಡ್ಡಬಳ್ಳಾಪುರ ನಡುವೆ ರಾಜ್ಯ ಸರ್ಕಾರವು ಅಭಿವೃದ್ಧಿಪಡಿಸುತ್ತಿರುವ ಮಹತ್ವಾಕಾಂಕ್ಷಿ ಕ್ವಿನ್ ಸಿಟಿಯಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಕಂಪನಿಯು 1,200 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಜಾಗತಿಕ

Read More

ಇಂದಿನಿಂದ ರಾಜ್ಯದಾದ್ಯಂತ ಅತ್ಯಾಧುನಿಕ ಆ್ಯಂಬುಲೆನ್ಸ್ ಸೇವೆ ಲಭ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಇಂದಿನಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಆ್ಯಂಬುಲೆನ್ಸ್ ಸೇವೆ ಲಭ್ಯವಾಗಲಿದ್ದು, ಈ ಸೇವೆ ಪರಿಣಾಮಕಾರಿಯಾಗಿ ಜನರಿಗೆ ತಲುಪಬೇಕು ಎನ್ನುವುದು ನನ್ನ ಆಶಯ ಎಂದು ಮುಖ್ಯಮಂತ್ರಿ

Read More

ನಿಮ್ಮ ಅಹವಾಲು

ಮುಖ್ಯಮಂತ್ರಿಗಳಿಗೆ ನಿಮ್ಮ ದೂರನ್ನು ತಲುಪಿಸಲು ಈ ಕೆಳಗಿನ ಅರ್ಜಿಯನ್ನು ತುಂಬಿ