ಬೆಂಗಳೂರಿನಲ್ಲಿ ಸರಗಳ್ಳತನ ಹಾಗೂ ಮಹಿಳೆಯರ ಮೇಲೆನ ದೌರ್ಜನ್ಯ ಹೆಚ್ಚಾಗಿದೆ ಹಾಗೂ ಕೊಲೆಗಳೂ ಕೂಡ ನಡೆಯುತ್ತಿವೆ. ಕಾನೂನುಬಾಹಿರ ಚಟುವಟಿಕಗೆಗಳಿಗೆ ಕಡಿವಾಣ ಹಾಕಲು ನಿರ್ಭಯಾ ನಿಧಿಯಡಿ ಬೆಂಗಳೂರು ಸೇಫ್ ಸಿಟಿ ಕಮಾಂಡ್ ಸೆಂಟರ್ ಕಟ್ಟಡ ನಿರ್ಮಾಣವಾಗಿದೆ. ಇದರ ಸದುಪಯೋಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಬೆಂಗಳೂರು ಸೇಫ್ ಸಿಟಿ ಕಮಾಂಡ್ ಸೆಂಟರ್ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಇಂಥ ಸೌಲಭ್ಯಗಳು ಜನರಿಗೆ ತಲುಪಿದಾಗ, ಅದು ಉಪಯೋಗಕ್ಕೆ ಬಂದಾಗ ಮಾತ್ರ ಸಾರ್ಥಕವಾಗುತ್ತದೆ. 668 ಕೋಟಿ ವೆಚ್ಚದಲ್ಲಿ ಕಮಂಡ್ ಸೆಂಟರ್ ನಿರ್ಮಾಣವಾಗಿದೆ. ನಿರೀಕ್ಷಿತ ಫಲ ಸಿಕ್ಕದೇ ಹೋದರೆ ಕಷ್ಟ. ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆ, ಮಹಿಳೆಯರ ಮೇಲೆ ದೌರ್ಜನ್ಯ, ಒಂಟಿ ಮನೆಗಳಿರುವಲ್ಲಿ, ವೃದ್ಧರು ಒಂಟಿಯಾಗಿರುವಲ್ಲಿ ಹೆಚ್ಚಿನ ಗಮನ ನೀಡಬೇಕು ಎಂದರು.

ಅಪರಾಧಗಳು ನಡೆಯದ ರೀತಿ ತಡೆಯಬೇಕು
ಅಪರಾಧವಾದ ನಂತರ ಶಿಕ್ಷೆ ಕೊಡುವುದು ಒಂದು ಭಾಗ. ಆದರೆ ಅಪರಾಧಗಳು ನಡೆಯದ ರೀತಿ ತಡೆಯಬೇಕು. ಬೆಂಗಳೂನಲ್ಲಿ ಕೊಲೆಯಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿಗಳ ಕೊಲೆ ಪ್ರಕರಣವನ್ನು ಉದಾಹರಿಸಿದ ಮುಖ್ಯಮಂತ್ರಿಗಳು ಇಂಥವು ನಡೆಯದಂತೆ ನೋಡಿಕೊಳ್ಳಬೇಕು ಎಂದರು. ಅದಕ್ಕೆ ಮಹಿಳೆಯರಿಗೆ ರಕ್ಷಣೆ ನೀಡುವ ಕೆಲಸ ಮಾಡಬೇಕು. ಪೋಲಿಸರು ತಮ್ಮ ವ್ಯಾಪ್ತಿಯಲ್ಲಿ ಹೆಚ್ಚಿನ ನಿಗಾ ವಹಿಸಬೇಕೆಂದರು.
ಬೆಂಗಳೂರು ಸುರಕ್ಷಿತ ನಗರವಾಗಬೇಕು
ನಗರದಲ್ಲಿ ಮೊದಲ ಬಾರಿ ಕಮಾಂಡ್ ಸೆಂಟರ್ ಸ್ತಾಪನೆಯಾಗಿದ್ದು ಇದರ ಅವಶ್ಯಕತೆ ಇರುವವರಿಗೆ ಇದರ ಪ್ರಯೋಜನ ದೊರಕಲಿ ಎಂದರು. ಅತ್ಯಾಧುನಿಕ ಉಪಕರಣಗಳನ್ನು ಕೇಂದ್ರದಲ್ಲಿ ಅಳವಡಿಸಲಾಗಿದ್ದು ಇವೆಲ್ಲವೂ ಉಪಯೋಗವಾಗಬೇಕು . ಹಾಗಾದಾರೆ ಕಮಾಂಡ್ ಸೆಂಟರ್ ನಿಂದ ಬೆಂಗಳೂರು ನಿಜವಾಗಿಯೂ ಸುರಕ್ಷಿತ ನಗರವೆನಿಸುತ್ತದೆ. ಪೋಲಿಸಿನವರಿಗೂ ಉತ್ತಮ ಹೆಸರು ಬರಲಿದೆ ಎಂದರು.
ತೊಂದರೆಯಲ್ಲಿರುವವರಿಗೆ 7 ನಿಮಿಷದೊಳಗೆ ನೆರವು :
ನಿರ್ಭಯ ನಿಧಿ ಅಡಿ ಬೆಂಗಳರು ನಗರ ಸೇಫ್ ಸಿಟಿ ಕಮಾಂಡ್ ಸೆಂಟರ್ ಕಟ್ಟಡವನ್ನು ಇಂದು ಉದ್ಘಾಟಿಸಲಾಗಿದೆ. ಈ ಯೋಜನೆಗೆ 661.5 ಕೋಟಿ ರೂ. ಖರ್ಚಾಗಿದೆ. ಕೇಂದ್ರ ಸರ್ಕಾರದ ಶೇ.60 ಹಾಗೂ ರಾಜ್ಯಸರ್ಕಾರದ ಶೇ. 40 ರಷ್ಟು ಅನುದಾನ ನೀಡಲಾಗಿದೆ. ಬೆಂಗಳೂರು ನಗರದ ಜನರಿಗೆ ಸುರಕ್ಷತೆಯನ್ನು ಈ ಕೇಂದ್ರ ಒದಗಿಸಲಿದೆ. ಮಹಿಳೆಯರು, ಅಂಗವಿಕಲರು, ವಯೋವೃದ್ಧರಿಗೆ ಯಾವುದೇ ತೊಂದರೆ ಸಂಭವಿಸಿದರೂ ಈ ಕೇಂದ್ರ ಅವರಿಗೆ ತ್ವರಿತ ಸಹಾಯ ಒದಗಿಸಲಿದೆ. ಈ ಕೇಂದ್ರದ ಸಹಕಾರದಿಂದ ಘಟನಾ ಸ್ಥಳಕ್ಕೆ ಸಂಬಂಧಪಟ್ಟ ಪೊಲೀಸ್ ಠಾಣೆಯ ಪೊಲೀಸರು 7 ನಿಮಿಷದೊಳಗೆ ಆಗಮಿಸಿ, ತೊಂದರೆಯಲ್ಲಿರುವ ಜನರಿಗೆ ನೆರವು ನೀಡಲಿದೆ. ಬೆಂಗಳೂರು ಸೇರಿದಂತೆ ದೇಶದ 8 ಕಡೆಗಳಲ್ಲಿ ಇಂತಹ ಕೇಂದ್ರವನ್ನು ತೆರೆಯಲಾಗಿದೆ. ದೇಶದ 8 ಸ್ಥಳಗಳಲ್ಲಿ ಈ ಕೇಂದ್ರಕ್ಕೆ ಮಂಜೂರಾತಿ ನೀಡಿದ್ದರೂ, ಬೆಂಗಳೂರಿನಲ್ಲಿ ಮಾತ್ರ ಸೇಫ್ ಸಿಟಿ ಕಮಾಂಡ್ ಕೇಂದ್ರ ಕಟ್ಟಡವನ್ನು ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸಲಾಗಿದೆ. ಈ ಕಟ್ಟಡಕ್ಕೆ ಸುಮಾರು 12 ಕೋಟಿ ರೂ. ವೆಚ್ಚವಾಗಿದೆ ಎಂದರು.

